' ಹೈ ಸ್ಕೂಲ್ ಲೈಫ್ '

          ಹೈ ಸ್ಕೂಲ್ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರೌಢ ಹಂತ. ಈ ಹಂತದಲ್ಲಿ ತಮ್ಮ ಪ್ರಾಥಮಿಕ ವಯಸ್ಸಿ ಅಷ್ಟೇನೂ ತಿಳುವಳಿಕೆಯನ್ನು ಹೊಂದಿರುವುದಿಲ್ಲ. ಆದರೆ ಹೈಸ್ಕೂಲ್ ಮೆಟ್ಟಿಲವನು ಹತ್ತಿದ ನಂತರ ತಿಳುವಳಿಕೆ ಯನ್ನು ಹೊಂದುತ್ತಾರೆ. ಅಲ್ಲಿಗೆ ವಯಸ್ಸು ಸುಮಾರು 13 - 14 ವರ್ಷದವರು ಆಗಿರುತ್ತಾರೆ. ಮುಂದೆ ಮೂರು ವರ್ಷ ತಮ್ಮ ಸ್ಕೂಲ್ ಲೈಫ್ ಅಲ್ಲಿ ನಡೆಯುವ ಹಲವಾರು ರೀತಿಯ ಬದಲಾವಣೆಯನ್ನು ನಾವು ಕಾಣುತ್ತೇವೆ. ಅಲ್ಲಿಗೆ ಹೆಚ್ಚಿನ ಬುದ್ಧಿಶಕ್ತಿಯನ್ನು ಹೊಂದುತ್ತಾರೆ. ಭೌತಿಕವಾಗಿ ಬದಲಾವಣೆ ಶಾರೀರಿಕವಾಗಿ ಬದಲಾವಣೆಯನ್ನು ಕಾಣಬಹುದು ಮತ್ತು ಪ್ರಮುಖವಾಗಿ ಯೌವನವನ್ನು ತುಂಬುತಾರೆ. ಅಲ್ಲಿಗೆ ಪ್ರೀತಿ- ಪ್ರೇಮ ಎಂಬ ಭಾವನೆಗಳು ಹುಟ್ಟಿಕೊಳ್ಳುತಾವೇ ಪ್ರೀತಿ ಅಂದರೆ ಆ ಸಮಯದಲ್ಲಿ Attraction ಆಗೋದರಿಂದ ಅದನೇ Love ಎಂಬ ಪದವನ್ನು ಸೃಷ್ಟಿಸುತ್ತಾರೆ. ಹೈ ಸ್ಕೂಲ್ ಸಮಯದಲ್ಲಿ Love ಎಂಬುವುದು ಪ್ರತಿಯೊಬ್ಬರಲ್ಲಿ ಹುಟ್ಟುದು ಸಹಜವಾಗಿರುತ್ತದೆ. ಅವರಿಗೆ ಆ ವಯಸ್ಸು ಆ ರೀತಿಯಾಗಿ ಮಾಡಿಸುತ್ತದೆ. 

          ಇದೊಂದು ಕಡೆ ಆದರೆ ಅಲ್ಲಿನ ಬೆಸ್ಟ್ ಫ್ರೆಂಡ್ಸ್ ಗಳನ್ನು ಮರೆಯೋಕೆ ಸಾಧ್ಯವಿಲ್ಲ. ಗೆಳೆಯ ಎಂಬುದು ಒಂದು ಎಲ್ಲವನ್ನು ಮೀರಿದ ಪ್ರೀತಿ ಮತ್ತು ಯಾವುದೇ ಸಮಯದಲ್ಲಿ ಸಹಾಯಕವಾಗಿ ಬರುವನು ಗೆಳೆಯ. ಹಾಗೆ ಗೆಳತಿಯರನ್ನು ಹಾಗೂ ಅಲ್ಲಿನ ಕ್ಲಾಸ್ ರೂಮ್ ಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಆ ಸಮಯದಲ್ಲಿ ನಮ್ಮ ಶಿಕ್ಷಕರು ಪ್ರವಾಸಿಕೆ ಕರೆದುಕೊಂಡು ಹೋದ ನೆನಪುಗಳನ್ನು ಮರೆಯೋಕೆ ಸಾಧ್ಯವಿಲ್ಲ. ಅಲ್ಲಿ ಮಾಡಿದ ಕೀಟಲೆಗಳು & ಇನ್ನಿತರ ಚಟುವಟಿಕೆಗಳು ಪ್ರತಿಯೊಬ್ಬರಿಗೂ ನೆನಪಾಗುತ್ತವೆ. ಹಾಗಾಗಿ ಆ ಸಮಯ ಮರಳಿ ಸಿಗೋಕ್ಕೆ ಪುಣ್ಯಮಾಡಿರಬೇಕು. ನಾನು ಕಲಿತ ಹೈಸ್ಕೂಲ್ ನಮ್ಮ ಊರಿನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ನಾವೆಲ್ಲರೂ ಅರ್ಧ ಗಂಟೆ ನಡೆದು ಹೋಗುವ ಕಾಲ ಇತ್ತು. ದಾರಿಯಲ್ಲಿ ನಮ್ಮ ಗೆಳೆಯ ಮತ್ತು ಗೆಳತಿಯರ ಜೊತೆ ಮಾತನಾಡುತ್ತಾ ಹೋಗುತಿದ್ದೆವು ಇದನ್ನೆಲ್ಲ ನೆನಪಿಸಿಕೊಳ್ಳುತ್ತಾ ಕೂತರೆ ಇನ್ನು ಬೇಜಾನ್ ಇದೆ. ನಮ್ಮ ಗುರುಗಳು ನಮಗೆ ಕೊಡುವ ಶಿಕ್ಷೆಯನ್ನು ನಾವು ನಮ್ಮ ಮುಂದಿನ ಲೈಫಲ್ಲಿ ಯಾವತ್ತಿಗೂ ಪಡೆಯಲು ಸಾಧ್ಯವಿಲ್ಲ' ಅದು ಆ ವಯಸ್ಸಿಗೆ ನಮಗೆ ಕೋಪವನ್ನು ಉಂಟು ಮಾಡಬಹುದು. ಅವರು ಭೇದೂ ಬಡೆದು ತಪ್ಪು ಮಾಡಿದ್ದಲ್ಲಿ ಶಿಕ್ಷೆಯನ್ನು ಕೊಡದೆ ಇದ್ದಿದ್ದರೆ ಅದೇ ತಪ್ಪುಗಳು ಮುಂದುವರೆಯುತ್ತಿತ್ತು. ಆ ತಪ್ಪುಗಳನ್ನು ತಿದ್ದುಕೊಂಡು ಈಗ ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿ ಕಾಣಲು ಸಾಧ್ಯ" ಒಟ್ಟಾರೆ ಪ್ರತಿಯೊಬ್ಬರ ಜೀವನದಲ್ಲಿ ಹುಡುಗ or ಹುಡುಗಿ ಆಗಿರ್ಲಿ ಇವರೆಲ್ಲರಿಗೂ ತಿಳುವಳಿಕೆ ಬಂದಾಗ ಯೌವನಾ ವಯಸ್ಸಿನಲ್ಲಿ ಇರುತ್ತಾರೆ. ಈ ಮೂಮೆಂಟ್ಗೆ ನಾವು ಒಂದು ಮೂವಿ ಹೆಸರನ್ನು ತಿಳಿಯಬಹುದು 99 ಎಂಬ ಕನ್ನಡ ಚಿತ್ರರಂಗದಲ್ಲಿ ಹಿಟ್ ಮೂವಿ ಹಳೆಯದನ್ನೆಲ್ಲ ನೆನಪಿಸುತ್ತ ತನ್ನ ಜೀವನವನ್ನು ಮುಗಿಸುವ ಸನ್ನಿವೇಶವನ್ನು ರಿಯಾಲಿಟಿಯಾಗಿ ತೋರಿಸಿರುತ್ತಾರೆ. ಅದು ಪದೇ ಪದೇ ಆ ನೆನಪುಗಳನ್ನು ತಿರುವಿ ಹಾಕುತ್ತದೆ.

             " ನಾನು ಹೇಳೋದಾದರೂ ನೀವು ಕಲಿತ ಹೈ ಸ್ಕೂಲ್ ಗೆ ಭೇಟಿ ನೀಡಿ ಅಲ್ಲಿರುವ ನೆನಪುಗಳನ್ನು ಮತ್ತೆ ಮನಸ್ಸಿನಲ್ಲಿ ನೆನೆಯುತ್ತಾ ಕಣ್ಮುಂದೆ ಬರುವ ಹಾಗೆ ಮಾಡಿಕೊಳ್ಳಿ ಯಾವತ್ತಿಗೂ ಮರೆಯೋಕೆ ಸಾಧ್ಯವಿಲ್ಲ ಎಂದು ಖಚಿತವಾಗಿ ತಿಳಿಸುತ್ತೇನೆ".

                                    ***  

                               ~ ಬೀರು ಕಂಬಳಿ 

Comments

Popular posts from this blog