' ಹೈ ಸ್ಕೂಲ್ ಲೈಫ್ ' ಹೈ ಸ್ಕೂಲ್ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರೌಢ ಹಂತ. ಈ ಹಂತದಲ್ಲಿ ತಮ್ಮ ಪ್ರಾಥಮಿಕ ವಯಸ್ಸಿ ಅಷ್ಟೇನೂ ತಿಳುವಳಿಕೆಯನ್ನು ಹೊಂದಿರುವುದಿಲ್ಲ. ಆದರೆ ಹೈಸ್ಕೂಲ್ ಮೆಟ್ಟಿಲವನು ಹತ್ತಿದ ನಂತರ ತಿಳುವಳಿಕೆ ಯನ್ನು ಹೊಂದುತ್ತಾರೆ. ಅಲ್ಲಿಗೆ ವಯಸ್ಸು ಸುಮಾರು 13 - 14 ವರ್ಷದವರು ಆಗಿರುತ್ತಾರೆ. ಮುಂದೆ ಮೂರು ವರ್ಷ ತಮ್ಮ ಸ್ಕೂಲ್ ಲೈಫ್ ಅಲ್ಲಿ ನಡೆಯುವ ಹಲವಾರು ರೀತಿಯ ಬದಲಾವಣೆಯನ್ನು ನಾವು ಕಾಣುತ್ತೇವೆ. ಅಲ್ಲಿಗೆ ಹೆಚ್ಚಿನ ಬುದ್ಧಿಶಕ್ತಿಯನ್ನು ಹೊಂದುತ್ತಾರೆ. ಭೌತಿಕವಾಗಿ ಬದಲಾವಣೆ ಶಾರೀರಿಕವಾಗಿ ಬದಲಾವಣೆಯನ್ನು ಕಾಣಬಹುದು ಮತ್ತು ಪ್ರಮುಖವಾಗಿ ಯೌವನವನ್ನು ತುಂಬುತಾರೆ. ಅಲ್ಲಿಗೆ ಪ್ರೀತಿ- ಪ್ರೇಮ ಎಂಬ ಭಾವನೆಗಳು ಹುಟ್ಟಿಕೊಳ್ಳುತಾವೇ ಪ್ರೀತಿ ಅಂದರೆ ಆ ಸಮಯದಲ್ಲಿ Attraction ಆಗೋದರಿಂದ ಅದನೇ Love ಎಂಬ ಪದವನ್ನು ಸೃಷ್ಟಿಸುತ್ತಾರೆ. ಹೈ ಸ್ಕೂಲ್ ಸಮಯದಲ್ಲಿ Love ಎಂಬುವುದು ಪ್ರತಿಯೊಬ್ಬರಲ್ಲಿ ಹುಟ್ಟುದು ಸಹಜವಾಗಿರುತ್ತದೆ. ಅವರಿಗೆ ಆ ವಯಸ್ಸು ಆ ರೀತಿಯಾಗಿ ಮಾಡಿಸುತ್ತದೆ. ಇದೊಂದು ಕಡೆ ಆದರೆ ಅಲ್ಲಿನ ಬೆಸ್ಟ್ ಫ್ರೆಂಡ್ಸ್ ಗಳನ್ನು ಮರೆಯೋಕೆ ಸಾಧ್ಯವಿಲ್ಲ. ಗೆಳೆಯ ಎಂಬುದು ಒಂದು ಎಲ್ಲವನ್ನು ಮೀರಿದ ಪ್ರೀತಿ ಮತ್ತು ಯಾವುದೇ ಸಮಯದಲ್ಲಿ ಸಹಾಯಕವಾಗಿ ಬರುವನು ಗೆಳೆಯ. ಹ...